FAQ ಗಳು
ನೀವು ಹೋಮ್ ಡೆಲಿವರಿ ನೀಡುತ್ತೀರಾ?
ನಾವು ಸದ್ಯಕ್ಕೆ ಹೋಮ್ ಡೆಲಿವರಿ ನೀಡುತ್ತಿಲ್ಲ. ಎಲ್ಲಾ ಆರ್ಡರ್‌ಗಳನ್ನು ಸುಳ್ಯದ ಎಲಿಮಲೆಯಲ್ಲಿರುವ ನಮ್ಮ ಸೂಪರ್ ಮಾರ್ಕೆಟ್ ಗೆ ಭೇಟಿ ನೀಡಿ ತೆಗೆದುಕೊಳ್ಳಬೇಕಾಗುತ್ತದೆ.
ಉತ್ಪನ್ನಗಳು ಲಭಿಸಲು ಎಷ್ಟು ಸಮಯ ಬೇಕಾಗುತ್ತದೆ?
ಗ್ರಾಹಕರು ಆರ್ಡರ್ ಮಾಡಿದ ನಂತರ ಸಾಮಾನ್ಯವಾಗಿ 2-10 ದಿನಗಳಲ್ಲಿ ಉತ್ಪನ್ನಗಳು ನಮ್ಮ ಎಲಿಮಲೆಯ ಸೂಪರ್ ಮಾರ್ಕೆಟ್ ಗೆ ತಲುಪುತ್ತದೆ. ಈ ಕಾಲಾವಧಿಯು ಗ್ರಾಹಕರು ಆರ್ಡರ್ ಮಾಡಿದ ಉತ್ಪನ್ನಗಳ ಮೇಲೆ ಅವಲಂಭಿತವಾಗಿದೆ. ನಾವು ದೇಶದ ಹಲವು ಕಡೆಗಳಿಂದ ಉತ್ಪನ್ನಗಳನ್ನು ಗ್ರಾಹಕರು ಆರ್ಡರ್ ಮಾಡಿದ ನಂತರ ತರಿಸುತ್ತೇವೆ. ಆದ್ದರಿಂದ ಬೆಂಗಳೂರಿನಿಂದ ತರಿಸುವ ಉತ್ಪನ್ನಗಳು 1-2 ದಿನದಲ್ಲಿ ತಲುಪಬಹುದು, ಸೂರತ್ ನಿಂದ ಬರುವ ಉತ್ಪನ್ನಗಳು 8-10 ದಿನಗಳಲ್ಲಿ ತಲುಪಬಹುದು. ಹೆಚ್ಚಿನ ಮಾಹಿತಿಗಾಗಿ ನಮ್ಮನ್ನು ಸಂಪರ್ಕಿಸಿ.
ನೀವು ನಗದು ಪಾವತಿಗಳನ್ನು ಸ್ವೀಕರಿಸುತ್ತೀರಾ?
ಹೌದು, ನಾವು ನಗದು ಪಾವತಿಯನ್ನು ಸ್ವೀಕರಿಸುತ್ತೇವೆ.
ನೀವು ಉತ್ಪನ್ನಗಳ ಮೇಲೆ ಖಾತರಿ ನೀಡುತ್ತೀರಾ?
ವಾರಂಟಿ ಅವಧಿಗಳು ಉತ್ಪನ್ನದಿಂದ ಉತ್ಪನ್ನಕ್ಕೆ ಬದಲಾಗುತ್ತವೆ. ಉತ್ಪನ್ನ ವಿವರಣೆಯಲ್ಲಿ ನಾವು ಪ್ರತಿ ಉತ್ಪನ್ನದ ಖಾತರಿ ವಿವರಗಳನ್ನು ಪ್ರದರ್ಶಿಸಿದ್ದೇವೆ.